Sunday, June 12, 2011


ಜೂನ 12 ಗುಲ್ಬರ್ಗಾ : ಎಪ್ರಿಲ ತಿಂಗಳ 15, 16, 17 ರಂದು ನಡೆದ ಗುಲ್ಬರ್ಗಾ ಉತ್ಸವದ ಕಾರ್ಯಕ್ರಮಕ್ಕೆ ಗುಲ್ಬರ್ಗಾ ಜನತೆಗೆ ಸ್ವಾಗತ, ಶುಭಾಶಯ ಕೋರಲು ಹಾಕಲಾದ ಬ್ಯಾನರನಲ್ಲಿ ಮಹಾನಗರಪಾಲಿಕೆ ಮೇಯರ ( ಅಷ್ಪಾಕ ಅಹೆಮದ ಚುಲಬುಲ ) ಅರ್ತಾರ್ಥ ಪ್ರಥಮ ಪ್ರಜೆ ಇವರು ಕನ್ನಡದ ಒಂದೇ ಒಂದು ಶಬ್ದ ಕೂಡಾ ಬಳಸದೆ ಸಂಪೂರ್ಣ ಉರ್ದುವಿನಲ್ಲಿ ಸ್ವಾಗತ ಶುಭಾಶಯ ಕೋರಿ ತಮ್ಮ ಉರ್ದು ಪ್ರೇಮ ಮೆರೆದಿದ್ದಾರೆ. ಹಾಗಂತಾ "ನಾವೇನು ಉರ್ದು ವಿರೋದಿಯಲ್ಲ ಅಥವಾ ಇನ್ನಾವುದೇ ಭಾಷೆ ವಿರೋದಿಗಳಲ್ಲಾ" ಕನ್ನಡಕ್ಕೆ ಪ್ರಥಮ  ಆಧ್ಯತೆ ಕೊಟ್ಟು ಇತರೆ ಯಾವುದೇ ಭಾಷೆ ಬಳಸಿದರೆ ನಮ್ಮ ವಿರೋಧ ಇರುತ್ತಿರಲಿಲ್ಲ ಆದರೆ ಇವರ ಈ ಕ್ರಮ ನೋಡಿದರೆ ಕನ್ನಡ ವಿರೋದಿ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಪ್ರಥಮ ಪ್ರಜೆಯೇ ಈ ರೀತಿ ಆದರೆ ಗುಲ್ಬರ್ಗದಲ್ಲಿ ಕನ್ನಡಕ್ಕೆ ಉಳಿಗಾಲವಿದೆಯೇ ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇತ್ತ ಗಮನ ಹರಿಸುವುದೇ ಕಾದು ನೋಡಬೇಕು.